Posts

Showing posts from October, 2017

ಕನ್ನಡ ಸಿರಿ - Kannada Siri - Greatness of Kannada

ಕನ್ನಡ ಸಿರಿ ಕನ್ನಡ ಕುಣಿಯಲಿ ಕನ್ನಡ ನಲಿಯಲಿ ಕನ್ನಡ ಜನತೆಯ ಹರಸುತಲಿರಲಿ ನಮ್ಮಯ ಭಾಷೆಯ ನಲ್ಮೆಯ ಸೊಗಸಿದು ಎಲ್ಲರ ಮನೆ ಮನ ಬೆಳಗುತಲಿರಲಿ ದ್ರಾವಿಡ ಮೂಲದ ಸೊಬಗಿನ ಸಿರಿಯಿದು ಉನ್ನತ ಹಿರಿಮೆಯ ಭಾಷೆಯಿದು ನಿಷ್ಕಳ ನಿಖರ ನ್ಯೂನತೆ ಅರಿಯದ ಸುಂದರ ಇದರ ವಿಕಸನವು ಗಂಗ ಕದಂಬರ ನೆರಳಲಿ ನಲಿದು ಚಾಲುಕ್ಯ ಹೊಯ್ಸಳ ಸಿರಿಯಲಿ ಬೆಳೆದು ಹಕ್ಕ ಬುಕ್ಕರ ಆಶ್ರಯ ಪಡೆದು ಮೈಸೂರು ಅರಸರ ನಾಡಲಿ ಹರಿದು ಆದಿಕವಿತ್ವದ ರತ್ನದ ಸಾಲಲಿ ಪಂಪ ರನ್ನರ ಬರಹದ ಸುಧೆಯಲಿ ವಚನದ ರಚನೆಯ ದಾಸರ ಪದಗಳ ದಾರಿ ದೀಪವು ಬೆಳಗಿರಲಿ ಕನ್ನಡದಾಸ್ತಿಯ ಕಥೆಗಳ ಸೆರೆಯಲಿ ಕುಗ್ಗದ ಕಗ್ಗದ ಆಳದ ಸಿರಿಯಲಿ ಕುಪ್ಪಳ್ಳಿಯ ಆ ಅವಿರತ ಬೆಳಕಲಿ ಒಲವಿನ ಕವಿತೆಯ ಚೆಲುವಿನ ಸವಿಯಲಿ ನಮ್ಮೆಯ ವರಕವಿ ನಾಡಿನ ಭಾಗ್ಯವಿ ಸವೆಯಿರಿ ಅಮೃತ ಕೃತಿಗಳನು ಪುಸ್ತಕದಕ್ಕರೆ ಎಲ್ಲರ ಸೆಳೆಯಲಿ ಬೆಳೆಸಿರಿ ಕನ್ನಡದೊಲುಮೆಯನು ಕಲಿಕೆಯ ಬೆಸುಗೆಯ ಪುನರಪಿ ಹೊಸೆಯಿಸಿ ಒಲವಿನ ಸಿರಿಯಲಿ ನಲಿಸುತಲಿರಲಿ ಕನ್ನದ ಮಾತೆಯ ವರಸಿರಿ ಭಾಷೆಯು ಎಂದೆಂದಿಗು ನಗು ಹರಿಸಿರಲಿ -ನವೀನ್