ಕನ್ನಡ ಸಿರಿ - Kannada Siri - Greatness of Kannada
ಕನ್ನಡ ಸಿರಿ
ಕನ್ನಡ ಕುಣಿಯಲಿ ಕನ್ನಡ ನಲಿಯಲಿ
ಕನ್ನಡ ಜನತೆಯ ಹರಸುತಲಿರಲಿ
ನಮ್ಮಯ ಭಾಷೆಯ ನಲ್ಮೆಯ ಸೊಗಸಿದು
ಎಲ್ಲರ ಮನೆ ಮನ ಬೆಳಗುತಲಿರಲಿ
ದ್ರಾವಿಡ ಮೂಲದ ಸೊಬಗಿನ ಸಿರಿಯಿದು
ಉನ್ನತ ಹಿರಿಮೆಯ ಭಾಷೆಯಿದು
ನಿಷ್ಕಳ ನಿಖರ ನ್ಯೂನತೆ ಅರಿಯದ
ಸುಂದರ ಇದರ ವಿಕಸನವು
ಗಂಗ ಕದಂಬರ ನೆರಳಲಿ ನಲಿದು
ಚಾಲುಕ್ಯ ಹೊಯ್ಸಳ ಸಿರಿಯಲಿ ಬೆಳೆದು
ಹಕ್ಕ ಬುಕ್ಕರ ಆಶ್ರಯ ಪಡೆದು
ಮೈಸೂರು ಅರಸರ ನಾಡಲಿ ಹರಿದು
ಆದಿಕವಿತ್ವದ ರತ್ನದ ಸಾಲಲಿ
ಪಂಪ ರನ್ನರ ಬರಹದ ಸುಧೆಯಲಿ
ವಚನದ ರಚನೆಯ ದಾಸರ ಪದಗಳ
ದಾರಿ ದೀಪವು ಬೆಳಗಿರಲಿ
ಕನ್ನಡದಾಸ್ತಿಯ ಕಥೆಗಳ ಸೆರೆಯಲಿ
ಕುಗ್ಗದ ಕಗ್ಗದ ಆಳದ ಸಿರಿಯಲಿ
ಕುಪ್ಪಳ್ಳಿಯ ಆ ಅವಿರತ ಬೆಳಕಲಿ
ಒಲವಿನ ಕವಿತೆಯ ಚೆಲುವಿನ ಸವಿಯಲಿ
ನಮ್ಮೆಯ ವರಕವಿ ನಾಡಿನ ಭಾಗ್ಯವಿ
ಸವೆಯಿರಿ ಅಮೃತ ಕೃತಿಗಳನು
ಪುಸ್ತಕದಕ್ಕರೆ ಎಲ್ಲರ ಸೆಳೆಯಲಿ
ಬೆಳೆಸಿರಿ ಕನ್ನಡದೊಲುಮೆಯನು
ಕಲಿಕೆಯ ಬೆಸುಗೆಯ ಪುನರಪಿ ಹೊಸೆಯಿಸಿ
ಒಲವಿನ ಸಿರಿಯಲಿ ನಲಿಸುತಲಿರಲಿ
ಕನ್ನದ ಮಾತೆಯ ವರಸಿರಿ ಭಾಷೆಯು
ಎಂದೆಂದಿಗು ನಗು ಹರಿಸಿರಲಿ
-ನವೀನ್
ಕನ್ನಡ ಕುಣಿಯಲಿ ಕನ್ನಡ ನಲಿಯಲಿ
ಕನ್ನಡ ಜನತೆಯ ಹರಸುತಲಿರಲಿ
ನಮ್ಮಯ ಭಾಷೆಯ ನಲ್ಮೆಯ ಸೊಗಸಿದು
ಎಲ್ಲರ ಮನೆ ಮನ ಬೆಳಗುತಲಿರಲಿ
ದ್ರಾವಿಡ ಮೂಲದ ಸೊಬಗಿನ ಸಿರಿಯಿದು
ಉನ್ನತ ಹಿರಿಮೆಯ ಭಾಷೆಯಿದು
ನಿಷ್ಕಳ ನಿಖರ ನ್ಯೂನತೆ ಅರಿಯದ
ಸುಂದರ ಇದರ ವಿಕಸನವು
ಗಂಗ ಕದಂಬರ ನೆರಳಲಿ ನಲಿದು
ಚಾಲುಕ್ಯ ಹೊಯ್ಸಳ ಸಿರಿಯಲಿ ಬೆಳೆದು
ಹಕ್ಕ ಬುಕ್ಕರ ಆಶ್ರಯ ಪಡೆದು
ಮೈಸೂರು ಅರಸರ ನಾಡಲಿ ಹರಿದು
ಆದಿಕವಿತ್ವದ ರತ್ನದ ಸಾಲಲಿ
ಪಂಪ ರನ್ನರ ಬರಹದ ಸುಧೆಯಲಿ
ವಚನದ ರಚನೆಯ ದಾಸರ ಪದಗಳ
ದಾರಿ ದೀಪವು ಬೆಳಗಿರಲಿ
ಕನ್ನಡದಾಸ್ತಿಯ ಕಥೆಗಳ ಸೆರೆಯಲಿ
ಕುಗ್ಗದ ಕಗ್ಗದ ಆಳದ ಸಿರಿಯಲಿ
ಕುಪ್ಪಳ್ಳಿಯ ಆ ಅವಿರತ ಬೆಳಕಲಿ
ಒಲವಿನ ಕವಿತೆಯ ಚೆಲುವಿನ ಸವಿಯಲಿ
ನಮ್ಮೆಯ ವರಕವಿ ನಾಡಿನ ಭಾಗ್ಯವಿ
ಸವೆಯಿರಿ ಅಮೃತ ಕೃತಿಗಳನು
ಪುಸ್ತಕದಕ್ಕರೆ ಎಲ್ಲರ ಸೆಳೆಯಲಿ
ಬೆಳೆಸಿರಿ ಕನ್ನಡದೊಲುಮೆಯನು
ಕಲಿಕೆಯ ಬೆಸುಗೆಯ ಪುನರಪಿ ಹೊಸೆಯಿಸಿ
ಒಲವಿನ ಸಿರಿಯಲಿ ನಲಿಸುತಲಿರಲಿ
ಕನ್ನದ ಮಾತೆಯ ವರಸಿರಿ ಭಾಷೆಯು
ಎಂದೆಂದಿಗು ನಗು ಹರಿಸಿರಲಿ
-ನವೀನ್
Comments
Post a Comment